Image default
Dancer Profile

ಬಹುಮುಖ ನೃತ್ಯಪ್ರತಿಭೆ ಮೋನಿಷಾ ನವೀನ್ ಕುಮಾರ್

ಅದಮ್ಯ ಕಲಾಪ್ರೀತಿ ಬಹುವಿರಳ ವ್ಯಕ್ತಿಗುಣ. ಎಲ್ಲರಲ್ಲೂ ಕಲಾಸಕ್ತಿ-ಪ್ರತಿಭೆಗಳನ್ನು ನಿರೀಕ್ಷಿಸಲಾಗದು. ಸಂಸ್ಕಾರ, ವಾತಾವರಣ, ಪ್ರೋತ್ಸಾಹ ಮತ್ತು ಪರಿಶ್ರಮಗಳಿಂದ ಸಿದ್ಧಿಸುವಂಥದು. ‘ಕಲೆ ಎಲ್ಲರನ್ನೂ ಕೈಬೀಸಿ ಕರೆದರೂ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ’ ಎಂಬ ನಾಣ್ಣುಡಿ ಇದೆ. ಅದರಂತೆ ಹುಟ್ಟು ಪ್ರತಿಭೆಯುಳ್ಳ ಮೋನಿಷಾ, ಬಾಳಿನುದ್ದಕ್ಕೂ ಅದನ್ನು ರೂಢಿಸಿಕೊಂಡು ಬಂದವರು.

ಮೂರುವರ್ಷದ ಮಗುವಾಗಿದ್ದಾಗಲೇ ಹಾಡು ಕೇಳುತ್ತಲೇ ಹೆಜ್ಜೆ ಹಾಕುತ್ತಿದ್ದ ಕೌಶಲ್ಯವನ್ನು ಗಮನಿಸಿದವರು ಅವಳ ಹೆತ್ತವರು. ಹೀಗಾಗಿ ಆಕೆಗೆ ಶಾಸ್ತ್ರೀಯ ನೃತ್ಯಶಿಕ್ಷಣ ಕೊಡಿಸಬೇಕೆಂದು ಆಗಲೇ ನಿರ್ಧರಿಸಿದರು.

ಮೂಲತಃ ಬೆಂಗಳೂರಿನವರಾದ ಶ್ರೀ ಕೆ.ಎಸ್. ಹನುಮಯ್ಯ ಮತ್ತು ಹೇಮಾವತಿ ದಂಪತಿಗಳು ಸರಕಾರೀ ಶಾಲೆಗಳಲ್ಲಿ ಮುಖ್ಯೋಪಾಧ್ಯಾರಾಗಿ ಸೇವೆ ಸಲ್ಲಿಸಿದ್ದು, ಮಗಳನ್ನು ಉತ್ತಮ ಸಂಸ್ಕಾರದ ವಾತಾವರಣದಲ್ಲಿ ಬೆಳೆಸಿದರು.  

 ಬಾಲಪ್ರತಿಭೆ ಮೋನಿಷಾ, ಹೆತ್ತವರ ಪ್ರೋತ್ಸಾಹ-ಬೆಂಬಲದಿಂದ ಉತ್ತಮ ನೃತ್ಯಕಲಾವಿದೆಯಾಗಿ ರೂಪುಗೊಂಡಳು. ಮೊದಲ ನೃತ್ಯಗುರು- ಅವಿನಾಶ್ ಭಾರಧ್ವಾಜ್. ತನ್ನ ನಾಲ್ಕೂವರೆ ವರ್ಷದಲ್ಲೇ ವೇದಿಕೆ ಹತ್ತುವ ಧಾಷ್ಟೀಕತೆ ತೋರಿ ನೆರೆದವರ ಮೆಚ್ಚುಗೆ ಗಳಿಸಿದಳು. ಮುಂದೆ ಕಲಾಮಂಡಲಂ ಖ್ಯಾತಿಯ ಗುರು ಉಷಾ ದಾತಾರ್ ಅವರ ಬಳಿ ಕೆಲವು ಕಾಲ ನೃತ್ಯಾಭ್ಯಾಸ ಮುಂದುವರಿಸಿದಳು. ಶಾಲಾ- ಕಾಲೇಜುಗಳಲ್ಲೂ ನೃತ್ಯ ಪ್ರದರ್ಶನ ಮತ್ತು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದ ಮೋನಿಷಾಗೆ ಸಾಹಿತ್ಯ, ಸಂಗೀತ-ನಾಟಕಾಭಿನಯಗಳಲ್ಲೂ ಸಮಾನ ಆಸಕ್ತಿ. ಜೊತೆಗೆ ಕ್ರೀಡೆಯಲ್ಲಿ ಆಸಕ್ತಿ, ಕವನ-ಕಥೆ-ಲೇಖನಗಳನ್ನು ಬರೆಯುವ ಹವ್ಯಾಸ. ನೃತ್ಯ-ಮೊದಲ ಒಲವಾದ್ದರಿಂದ ಪ್ರತಿನಿತ್ಯ ಬಿಡದ ನೃತ್ಯಾಭ್ಯಾಸ, ಕಠಿಣ ಪರಿಶ್ರಮ.

 ಅನಂತರ ಗುರು ಸಂಧ್ಯಾ ಕೇಶವರಾವ್ ಬಳಿ ಹೆಚ್ಚಿನ ತರಬೇತಿ ಪಡೆದು, ಅವರ ನೃತ್ಯಶಾಲೆಯ ಅನೇಕ ನೃತ್ಯರೂಪಕ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೋನಿಷಾ ಪ್ರೇಕ್ಷಕರ ಗಮನ ಸೆಳೆದಳು. ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸುವ ‘ಯುವ ಸೌರಭ’ಮುಂತಾದ ಅನೇಕ ಕಾರ್ಯಕ್ರಮಗಳಲ್ಲಿ ಏಕವ್ಯಕ್ತಿ ನೃತ್ಯ ಪ್ರದರ್ಶನ ನೀಡಿದಳು. ಕರ್ನಾಟಕ ಸರ್ಕಾರದ  ಜ್ಯೂನಿಯರ್ ನೃತ್ಯಪರೀಕ್ಷೆ, ಪುಣೆಯ ಗಂಧರ್ವ ವಿಶ್ವವಿದ್ಯಾಲಯದ ಪರೀಕ್ಷೆ ಮತ್ತು ಚೆನ್ನೈನ ಬ್ರಿಡ್ಜ್ ಅಕಾಡೆಮಿಯ ಗ್ರೇಡ್ ಪರೀಕ್ಷೆಯಲ್ಲಿ ಜಯಶೀಲಳಾಗಿರುವುದು ಇವಳ ಹೆಮ್ಮೆ. ಮುಂದೆ ಗುರು ಡಾ. ಗುರು ಸುಮನಾ ರಂಜಾಳ್ಕರ್ ಅವರ ಗರಡಿಯಲ್ಲಿ ಮೋನಿಷಾ ತರಪೇತು ಪಡೆದು ಯಶಸ್ವಿಯಾಗಿ ‘ರಂಗಪ್ರವೇಶ’ವನ್ನು ಮಾಡಿದಳು. ಆಮೇಲೆ-ಗುರು ದರ್ಶಿನಿ ಮಂಜುನಾಥ್ ಹಾಗೂ ಗಾಯತ್ರಿ ಬಾಲಾಜಿ ಅವರ ಮಾರ್ಗದರ್ಶನವೂ ದೊರಕಿತು.

ರಾಜ್ಯಾದ್ಯಂತ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ ಮೋನಿಷಾ ತನ್ನದೇ ಆದ ‘ನಾಟ್ಯ ಸನ್ನಿಧಿ’ ಎಂಬ ಭರತನಾಟ್ಯ ಶಾಲೆಯನ್ನು ಮತ್ತು ‘ಕಲಾಸಿರಿ ಸಾಂಸ್ಕೃತಿಕ ವೇದಿಕೆ’ಯನ್ನು ಸ್ಥಾಪಿಸಿ ತನ್ನ ನರ್ತನ-ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಳು. ನೂರಾರು ನೃತ್ಯಾಕಾಂಕ್ಷಿಗಳಿಗೆ ಶಿಕ್ಷಣ ನೀಡುತ್ತಿರುವ ಈಕೆ ಅಶಕ್ತ ಪ್ರತಿಭಾನ್ವಿತರ ಕಲಾಪೋಷಣೆಗಾಗಿ ವೇದಿಕೆಯ ಮೂಲಕ ಬೆಂಬಲ-ಅವಕಾಶ ಒದಗಿಸುತ್ತಿರುವುದು ವಿಶೇಷ. ದೂರದರ್ಶನ ಮತ್ತಿತರ ವಾಹಿನಿಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದು, ಈಕೆಯ ಶಿಷ್ಯರೂ ವಾಹಿನಿಗಳಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿರುವುದು ವಿಶೇಷ. ವಿಶೇಷವಾಗಿ, ‘ನವಶಕ್ತಿ ವೈಭವ’ ನೃತ್ಯರೂಪಕಕ್ಕೆ ನೃತ್ಯ ಸಂಯೋಜಿಸಿ ಅನೇಕ ಪ್ರದರ್ಶನಗಳನ್ನು ಸಾದರಪಡಿಸಿದ್ದು ಅನೇಕ ವಚನಗಳಿಗೂ ನೃತ್ಯವನ್ನು ಸಂಯೋಜಿದ್ದಾರೆ ಮೋನಿಷಾ.

ನಾಡಿನ ಬಹುತೇಕ ಎಲ್ಲ ದೇವಾಲಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ನೃತ್ಯಸೇವೆಗೈದಿರುವ ಇವರು,ರವೀಂದ್ರ ಕಲಾಕ್ಷೇತ್ರದ ಸುವರ್ಣಮಹೋತ್ಸವ ಕಾರ್ಯಕ್ರಮ, ಬೆಂಗಳೂರು ನಗರ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಸಂಸ್ಕೃತಿ ಇಲಾಖೆಯ ಮಹಿಳಾ ಸಾಂಸ್ಕೃತಿಕ ಉತ್ಸವ, ನಟನಂ ಫೌಂಡೆಶನ್ನಿನ ರಂಗ ಅನುಭವಂ ಮುಂತಾದ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವರಲ್ಲದೆ, ಯು.ಎ.ಇ.- ದುಬೈನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನರ್ತಿಸಿದ್ದಾರೆ.

ನೃತ್ತಾಭಿನಯಗಳಲ್ಲಿ ಚತುರೆಯಾದ ಮೋನಿಷಾ ಓದಿನಲ್ಲೂ ಮಹಾ ಜಾಣೆ. ಶಾಲಾ-ಕಾಲೇಜಿನ ವಿದ್ಯಾಭ್ಯಾಸಗಳಲ್ಲಿ ಉತ್ತಮ ಶ್ರೇಯಾಂಕ ಪಡೆದು ತೇರ್ಗಡೆಯಾಗಿದ್ದು,  ಬಯೋಟೆಕ್ನಾಲಜಿಯಲ್ಲಿ ಬಿಎಸ್ಸಿ ಪದವಿ ಮತ್ತು ಮೈಕ್ರೋಬಯಾಲಜಿ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆಯಾದರು. ರಾಷ್ಟ್ರೀಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನೂ ಮಂಡಿಸಿರುವ ಹಿರಿಮೆ ಇವರದು. ಅನಂತರ, ಬಿ.ಎಡ್. ಪಾಸ್ ಮಾಡಿ ಮುಂದೆ ಎಂ.ಎಡ್.ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ, ಸ್ವರ್ಣ ಪದಕ ವಿಜೇತೆ. ಎರಡು ಸ್ನಾತಕೋತ್ತರ ಪದವಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಮೋನಿಷಾ, ಇದೀಗ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಶಿಕ್ಷಣಕ್ಷೇತ್ರದಲ್ಲಿ ಪಿ.ಹೆಚ್.ಡಿ.ಮಾಡುವ ಸಿದ್ಧತೆಯಲ್ಲಿದ್ದಾರೆ. ಶೈಕ್ಷಣಿಕವಾಗಿ ಸಾಕಷ್ಟು ಪರಿಶ್ರಮ ಹೊಂದಿರುವ ಮೋನಿಷಾಗೆ ಶಿಕ್ಷಣರಂಗದಲ್ಲಿ ಅನೇಕ ಉದ್ಯೋಗಗಳು ದೊರೆತರೂ, ನೃತ್ಯರಂಗಕ್ಕೆ ಅವರು ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ನೃತ್ಯ ಸಾಧನೆಯೇ ತಮ್ಮ ಮುಂದಿರುವ ಗುರಿ ಎಂಬುದವರ ಅಚಲ ನಂಬಿಕೆ.

ಕೆಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ, ಡಬ್ಬಿಂಗ್ ಕಲೆ ರೂಢಿಸಿಕೊಂಡಿರುವ ಮೋನಿಷಾರ ನೃತ್ಯಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಪುರಸ್ಕರಿಸಿವೆ. ಮಹಾರಾಣಿ ವಿಜ್ಞಾನ ಕಾಲೇಜಿನಿಂದ ‘ಮಿಸ್ ಟ್ಯಾಲೆಂಟ್-2010’ ಪ್ರಶಸ್ತಿ, ಮೈಸೂರು ಹುಲಿ ಟಿಪ್ಪುಸುಲ್ತಾನ್ ಹೆಸರಿನ ರಾಜ್ಯಪ್ರಶಸ್ತಿ, ನಾಟ್ಯ ಕಲಾಚತುರೆ ಬಿರುದು, ನಾಟ್ಯ ಕುಸುಮಾಂಜಲಿ ಕಲಾಪ್ರಶಸ್ತಿ, ನಾದಭೂಷಣ ಮುಂತಾದ ಬಿರುದಾವಳಿಗಳು ಸಂದಿವೆ.

ಮಡದಿಯ ಬಹುಮುಖ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸರಕಾರೀ ಉದ್ಯೋಗದಲ್ಲಿರುವ ಪತಿ ನವೀನ್ ಕುಮಾರ್, ನೃತ್ಯ ಕಲಿಯುತ್ತಿರುವ ಆರುವರ್ಷದ ಮಗಳು ತನಿಷಾ ಎನ್.ಸುಮೋಹನ ಮತ್ತು ನಾಲ್ಕುವರ್ಷದ ಮಗ ಚಿರಂಜೀವಿ ಎನ್. ಸುಮೋಹನರಿಂದ ಕೂಡಿದ ಸಂತೃಪ್ತ-ನಲಿವಿನ ಸಂಸಾರ ಮೋನಿಷಾ ಅವರದು.   

                                                    ****************

Related posts

ಕೂಚಿಪುಡಿ ನೃತ್ಯ ಪ್ರವೀಣೆ ರೇಖಾ ಸತೀಶ್

YK Sandhya Sharma

ಪ್ರತಿಭಾನ್ವಿತ ನಾಟ್ಯಚತುರ ಗುರುರಾಜ ವಸಿಷ್ಠ

YK Sandhya Sharma

ಭರತನಾಟ್ಯ ಕಲಾಸಾಧಕಿ ‘ಕರ್ನಾಟಕ ಕಲಾಶ್ರೀ’ ವಿದ್ಯಾ ರವಿಶಂಕರ್

YK Sandhya Sharma

16 comments

Mamatha October 21, 2020 at 6:51 pm

Every words in the article are true… Monisha madam is a dedicated dance trainer… A good human being… Always supportive to her dance students… My daughter is lucky… She got such a humble and down to earth dance guru… Thank you madam… Thank you for everything…. Actually thanks is the least word that we can say to you to show our appreciation for everything that you are doing for your students.. 🙏

Reply
YK Sandhya Sharma October 21, 2020 at 7:04 pm

Thank you very much dear Mamatha for your heartfelt words.

Reply
Kavana October 21, 2020 at 7:34 pm

Very dedicated teacher,we are also very proud to called her as her student.

Reply
YK Sandhya Sharma October 21, 2020 at 8:02 pm

Thank you.

Reply
Monisha October 21, 2020 at 8:43 pm

Thank you so much Y K Sandhya Sharma mam for this beautifully written article.. Its a great privilege to have my article in Sandhya Patrike written by you….
Thank you for such a wonderful words ….

Reply
YK Sandhya Sharma October 22, 2020 at 11:18 am

Thank you dear Monisha. You deserve all encouragement and appreciations. God Bless you. You have a Bright future.

Reply
Chaithra R October 21, 2020 at 8:51 pm

Proud to be a student of great teacher
Thank u mam🙏 For teaching us dance

Reply
YK Sandhya Sharma October 22, 2020 at 11:19 am

convey her your opinion directly, not to Sandhya Patrike.

Reply
Disha Raj the student of Monisha Naveen October 22, 2020 at 12:58 pm

Wow Sandhya Mam you have really written very wonderful and amazing article on Monisha Mam, I have shared A link to my all friends they really loved your article ,
appreciated Sandhyapathrike and as well you Sandhya mam…….👑👑
Thank you 🙏🙏

Reply
Disharaj K student of Monisha Mam October 22, 2020 at 1:01 pm

Not only on Monisha Mam for all Dance Teachers

Reply
YK Sandhya Sharma October 22, 2020 at 6:22 pm

ok. thank you.

Reply
Disha Raj October 22, 2020 at 8:35 pm

Afcource mam
Thank you 🙏🙏

Reply
YK Sandhya Sharma October 22, 2020 at 10:16 pm

Thanks

Reply
YK Sandhya Sharma October 22, 2020 at 6:21 pm

Thank you dear Disha Raj thank you very much for your lovely words. pl. subscribe freely to Sandhya Patrike. and tell all your friends to subscribe.

Reply
Disha Raj October 22, 2020 at 8:36 pm

Afcource mam
Thank you 🙏🙏

Reply
YK Sandhya Sharma October 22, 2020 at 10:17 pm

Thanks

Reply

Leave a Comment

This site uses Akismet to reduce spam. Learn how your comment data is processed.