‘ಕನಕ ಮನೆ ಮನೆ ತನಕ’ – ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ, ಕನಕದಾಸರ ತತ್ವ- ಸಾಹಿತ್ಯವನ್ನು ವ್ಯಾಪಕವಾಗಿ ಪ್ರಚುರಪಡಿಸುವ ಉನ್ನತ ಆಶಯದಿಂದ, ಕರ್ನಾಟಕ ಸರ್ಕಾರ- ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ-ಬೆಂಗಳೂರು ಮತ್ತು ಸಂಗೀತ ಸಂಭ್ರಮ (ರಿ) ಬೆಂಗಳೂರು ಇವರು ಜಂಟಿಯಾಗಿ, ದಿ. 4 ನೇ ತಾ. ನಿಂದ 6 ನೇ ತಾ. ವರೆಗೆ ವಿವಿಧ ಸಭಾಂಗಣಗಳಲ್ಲಿ ಮನೋಲ್ಲಾಸದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳಿಂದ ಗುರುತಿಸಿಕೊಂಡಿರುವ ಕೆಲ ಸಾಧಕರನ್ನು ಗೌರವಿಸುವ-ಪುರಸ್ಕರಿಸುವ ಸಮಾರಂಭವೂ ಇವೆ. ಇವುಗಳನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಸಾಹಿತ್ಯಾಭಿಮಾನಿಗಳಿಗೂ ಆದರದ ಸುಸ್ವಾಗತ.

