Image default
Articles

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ….

ಕೋರೋನಾ ಮಹಾ ಮಾರಿಯಿಂದ ಇಡೀ ಪ್ರಪಂಚ ಸ್ತಬ್ಧವಾಗಿದೆ. ಎಲ್ಲ ದೇಶಗಳ ಆರ್ಥಿಕತೆಯೂ ಪಾತಾಳದತ್ತ ದಾಪುಗಾಲಿಡುತ್ತಿದೆ,. ದೊಡ್ಡ ಉದ್ಯಮಿಗಳೇ ತಮ್ಮ ಉದ್ಯೋಗಿಗಳಿಗೆ ನೀಡಬೇಕಿರುವ ಸಂಬಳವನ್ನು ಅಳೆದು ಸುರಿದು ನೀಡುತ್ತಿವೆ. ಕಾರಣ ವ್ಯಾಪಾರ ವಹಿವಾಟುಗಳಿಲ್ಲದೆ ಎಲ್ಲ ಮಾರುಕಟ್ಟೆಗಳಿಗೂ ಕೊರೋನಾ ಸೋಂಕಿನ ಗರ ಬಡಿದಿದೆ. ಮೊದಲು ಆರೋಗ್ಯ ನಂತರ ಆರ್ಥಿಕತೆ ಎಂಬ ಅಂಶಕ್ಕೆ ಒತ್ತು ನೀಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನೇ ಸಂಪೂರ್ಣ ಲಾಕ್ಡೌನ್ ಮಾಡಿದ್ದರು. ಇದೀಗ ಜನ ಜೀವನವು ಸಹಜ ಸ್ಥಿತಿಯತ್ತ ಮರಳುತ್ತಲಿದೆ… ಆದರೆ, ಇದುವರೆಗೂ ಇದ್ದಂತೆ ಇನ್ನೂ ಕೆಲವು ದಿನ ನಮ್ಮ ಬದುಕುಗಳಿರುವುದಿಲ್ಲ ಎಂಬುದು ಎಲ್ಲರಿಗೂ ಅರಿವಾಗಿರುವ ಸತ್ಯ. ಆರೋಗ್ಯ ವೃದ್ಧಿಗಾಗಿ ಲಾಕ್ಡೌನ್ ಪಾಲಿಸಿದ್ದಾಯ್ತು ಇನ್ನು ಆರ್ಥಿಕತೆಯನ್ನು ವೃದ್ಧಿಸಿಕೊಳ್ಳಲು ದುಡಿಯಬೇಕಿದೆ.

ಇದುವರೆಗೂ ಸಂಕಷ್ಟಗಳನ್ನು ಎದುರಿಸಿ ಗೆದ್ದ ದೇಶಗಳೆಂದು ಜಪಾನ್ ಇಸ್ರೇಲ್ ನಂತಹ ದೇಶಗಳನ್ನು ಉದಾಹರಣೆ ನೀಡಲಾಗುತ್ತಿತ್ತು ಇನ್ನು ಮುಂದೆ ಭಾರತವನ್ನು ಉದಾಹರಣೆ ನೀಡುವಂತಾಗಬೇಕು, ಅದಕ್ಕಾಗಿಯೇ ಮೊನ್ನೆ ನಮ್ಮ ಪ್ರಧಾನಿಗಳು ಹೇಳಿದ್ದು “ ಆತ್ಮನಿರ್ಭರ “ ಭಾರತ ಸೃಷ್ಟಿಯಾಗಬೇಕು ಎಂದು.

ಆತ್ಮನಿರ್ಭರ ಭಾರತ…!? ಹಾಗೆಂದರೇನು…!? ಅನ್ನೋ ಪ್ರಶ್ನೆಗಳು ಎಲ್ಲರಲ್ಲೂ ಮೂಡಿವೆ.

ಭಾರತೀಯರಾದ ನಾವು ನಮ್ಮ ಆರ್ಥಿಕತೆಯನ್ನು ಮುನ್ನಡೆಸುವ ಜೊತೆಜೊತೆಗೆ ನಮಗೆ ಅತ್ಯವಶ್ಯಕವಾದ ಆಹಾರ, ಬಟ್ಟೆ, ಸೂರು, ಅಕ್ಷರ, ಇವುಗಳನ್ನು ಪಡೆಯಲು ಸ್ವಾವಲಂಬಿಗಳಾಗಬೇಕು. ಹಾಗೆ ಸ್ವಾವಲಂಬಿಗಳಾಗಲು ನಮ್ಮೊಳಗೆ ಆತ್ಮವಿಶ್ವಾಸ, ಮತ್ತು ಶ್ರಮದ ಅವಶ್ಯಕತೆ ಇದೆ. ಭಾರತವು ಈವರೆಗೆ ಅವಶ್ಯಕ ವಸ್ತುಗಳಿಗೆ ಕೆಲ ವಿದೇಶಿ ವಸ್ತುಗಳ ಮೇಲೆ ಅವಲಂಭಿತವಾಗಿತ್ತು, ಆದರೆ ಇನ್ನು ಮುಂದೆ ಸಧೃಡ ಸ್ವಾವಲಂಬೀ ಭಾರತವನ್ನು ಕಟ್ಟುವುದು ನಮ್ಮೆಲ್ಲರ ಹೊಣೆಯಾಗಿದೆ. ನಮಗೆ ಬೇಕಾದ ಪ್ರತಿ ಅವಶ್ಯಕ ವಸ್ತುಗಳನ್ನೂ ನಮ್ಮ ದೇಶದೊಳಗೇ ತಯಾರಿಸುವಂತಾಗಬೇಕು ಮತ್ತು ಅವುಗಳನ್ನೇ ನಾವು ಬಳಸುವ ಮೂಲಕ ದೇಶದ ಆರ್ಥಿಕತೆಯನ್ನು ಮುನ್ನಡೆಸಬಹುದಾಗಿದೆ. ಹೀಗೆ ಮುನ್ನಡೆಸಿದಾಗ ನಿರ್ಮಾಣವಾಗುವುದೇ

“ ಆತ್ಮನಿರ್ಭರ ಭಾರತ ”

ಅನಾದಿಕಾಲದಿಂದಲೂ ಭಾರತ ಶ್ರೀಮಂತ ದೇಶ ಕಾರಣ ವಿಶ್ವದೆಲ್ಲಡೆ ಹುಡುಕಿದರೂ ಸಿಗದಷ್ಟು ಸಂಪನ್ಮೂಲ ನಮ್ಮ ದೇಶದಲ್ಲಿದೆ. ನಮ್ಮಲ್ಲೆ ಇರುವ ಸಂಪನ್ಮೂಲಗಳನ್ನು ಬಳಸಿ ನಾವು ನಮಗೆ ಬೇಕಾದ ಅಗತ್ಯ ವಸ್ತುಗಳನ್ನು ತಯಾರಿಸಿಕೊಳ್ಳಬಹುದಾಗಿದೆ.

ಇನ್ನು ಹೀಗೇ ಏಕಾಏಕಿ ಸ್ವಾವಲಂಭಿಗಳಾಗುವೆವು ಎಂದರೂ ಆ ಹಾದಿ ಅಷ್ಟು ಸುಭವಲ್ಲ ಅದಕ್ಕಾಗಿಯೇ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸಾಕಷ್ಟು ನೆರವು ಘೋಷಿಸಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಿಸಿರುವ ಬೃಹತ್ ಪ್ಯಾಕೇಜುಗಳು ದೇಶದ ಉತ್ಸಾಹಿ ಉದ್ಯಮಿಗಳು ಹಾಗೂ ಕೃಷಿಕರಲ್ಲಿ ಆಶಾಭಾವನೆಯನ್ನಂತೂ ಮೂಡಿಸಿವೆ. ರೈತಾಪಿ ವರ್ಗ ಹೊಸ ಮಾರುಕಟ್ಟೆಯ ಕನಸು ಕಾಣುತ್ತಿದ್ದರೆ ಮಧ್ಯಮ ಮತ್ತು ಸಣ್ಣ ಉತ್ಪಾದಕರು ಸ್ವದೇಶಿ ಕಲ್ಪನೆಯನ್ನು ಕೇಳಿ ಆಕರ್ಷಿತರಾಗಿದ್ದಾರೆ. ಹಳೆ ಬೇರು ಹೊಸ ಚಿಗುರು ಎನ್ನುವಂತೆ ನಮ್ಮ ಸಾಂಪ್ರದಾಯಿಕ ಉದ್ಯಮಗಳಿಗೂ ಆಧುನಿಕತೆಯ ಮೆರುಗು ಬರಲಿದೆ. ಅಲ್ಲದೆ ವಿಶ್ವದಾದ್ಯಂತ ಬೇಡಿಕೆ ಪಡೆಯುವ ಮುನ್ಸೂಚನೆಯೂ ಇದೆ.

ಕೋರೋನಾ ಮಹಾ ಮಾರಿಯ ದೆಸೆಯಿಂದ 55 ದಿನಗಳ ಕಾಲ ದೇಶ ಸ್ತಬ್ಧವಾಗಿ ಹೋಗಿತ್ತು ಏನಿಲ್ಲ ನಮ್ಮಲ್ಲಿ ಎಂದು ಆಲೋಚಿಸಿದಾಗ ಎಲ್ಲವೂ ಇದೆ ನಮ್ಮಲ್ಲಿಯೇ ಎಂದು ತೋರಿಸಿ ಕೊಟ್ಟಿದ್ದು ಪಿಪಿಇ ಕಿಟ್ ತಯಾರಿಕೆ. ಹೌದು…!

ಈವರೆಗೆ ಪಿಪಿಇ ಕಿಟ್, ಮಾಸ್ಕ್ ಗಳಿಗಾಗಿ ನೆರೆಯ ಚೀನಾ ಮೇಲೆ ಅವಲಂಭಬಿತರಾಗಿದ್ದ ನಾವು ಇಂದು ಸ್ವಾವಲಂಬ ನೆಯತ್ತ ಹೆಜ್ಜೆ ಹಾಕಿ ಯಶಸ್ಸು ಕಂಡಿದ್ದೇವೆ. ಹಾಗೆಯೇ ನಮ್ಮಲ್ಲಿನ ಕಚ್ಚಾವಸ್ತುಗಳನ್ನು ಹೊರ ದೇಶಗಳಿಗೆ ಸಾಗಿಸಿ ಅಲ್ಲಿ ತಯಾರಾದ ವಸ್ತುಗಳನ್ನು ಮತ್ತೆ ಆಮದು ಮಾಡಿಕೊಂಡು ಬಳಸುವ ಕೆಲಸ ಬಿಟ್ಟು, ನಾವೇ ನಮ್ಮಲ್ಲಿಯೇ ತಯಾರಿಕಾ ಘಟಕ ಸ್ಥಾಪಿಸಿಕೊಳ್ಳಬಹುದಲ್ಲವೇ…!? ಆ ಮೂಲಕ ನಾವೂ ಸ್ವಾವಲಂಬಿಗಳಾಗಬಹುದಲ್ಲವೆ…!

ಈಗಾಗಲೇ ಇರುವ ಗುಡಿ ಕೈಗಾರಿಕೆಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರೋತ್ಸಾಹ ನೀಡಿದರೆ ಇಲ್ಲಿಯೇ ವಿಫುಲ ಉದ್ಯೋಗ ಸೃಷ್ಟಿಯೊಂದಿಗೆ ಸ್ವಾವಲಂಬೀ ಭಾರತದ ಕನಸೂ ನನಸಾಗುತ್ತದೆಯಲ್ಲವೇ…!

ನಾವೆಲ್ಲರೂ ಈಗ ಭಾರತದ ಆರ್ಥಿಕತೆ ಬಲುದೊಡ್ಡ ನೆಗೆತ ಕಾಣುವಂತೆ ಯೋಜನೆಗಳನ್ನು ರೂಪಿಸಬೇಕಾಗಿದೆ. ಒಬ್ಬರಿಂದ ಏನೂ ಸಾಧ್ಯವಿಲ್ಲ ಎಂಬ ಹಳೇ ವಾಕ್ಯ ಮರೆತು ನಮ್ಮಿಂದಲೇ ಶುರುವಾಗಲಿ ಬದಲಾವಣೆ ಎನ್ನುವತ್ತ ಹೆಜ್ಜೆ ಹಾಕೋಣ. ಜಾಗತಿಕ ಮಟ್ಟದಲ್ಲಿ ಭಾರತವು ಬೃಹತ್ ಮಾರುಕಟ್ಟೆಯಾಗಲಿ.

ಲೇಖಕರು -ಮೇದಿನಿ ಉದಯ್ ಗರುಡಾಚಾರ್

ಸಂಸ್ಥಾಪಕರು ಗರುಡಾ ಫೌಂಡೇಶನ್

Related posts

Musical journey of Sangeetha Kalaratna Vidwan S. Shankar

YK Sandhya Sharma

DR.GEETHA RAMANUJAM –A woman with a difference

YK Sandhya Sharma

MUSIC IN KUCHIPUDI

YK Sandhya Sharma

2 comments

BHAGYA Y July 18, 2020 at 7:39 pm

Namma Mam and sir both super legends my heart full wishss great works thank you very mach all the best Mam and sir

Reply
YK Sandhya Sharma July 18, 2020 at 8:27 pm

certainly..
Thank you.

Reply

Leave a Comment

This site uses Akismet to reduce spam. Learn how your comment data is processed.