ರಂಜನಿ ವೀಣಾ ಬೆಳವಾಡಿ ರಂಗಪ್ರವೇಶ
ಖ್ಯಾತ ‘ನಾಟ್ಯ ಸಂಕುಲ ಸ್ಕೂಲ್ ಆಫ್ ಭರತನಾಟ್ಯ’ ನೃತ್ಯಸಂಸ್ಥೆಯ ಗುರು ವಿದುಷಿ ಕೆ.ಎಸ್. ನಾಗಶ್ರೀ ಖ್ಯಾತ ನೃತ್ಯಪಟು, ರಂಗಭೂಮಿಯಲ್ಲೂ ಅಭಿನೇತ್ರಿಯಾಗಿ ಸಾಕಷ್ಟು ಪರಿಶ್ರಮ ಹೊಂದಿರುವಂಥ ಬದ್ಧತೆಯ ಗುರುಗಳ ಸಮರ್ಥ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ರಂಜನಿ ವೀಣಾ ಬೆಳವಾಡಿ. ಕಳೆದ ಹನ್ನೆರಡು ವರ್ಷಗಳಿಂದ ಭರತನಾಟ್ಯಾಭ್ಯಾಸ ಮಾಡುತ್ತಿರುವ ರಂಜನಿ ತನ್ನ ಕಲಾನೈಪುಣ್ಯವನ್ನು ಪ್ರದರ್ಶಿಸಲು ಇದೇ ತಿಂಗಳ 19 ಭಾನುವಾರದಂದು ಸಂಜೆ 6 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡಲಿದ್ದಾಳೆ.
ರಂಜನಿ ಬಹುಮುಖಪ್ರತಿಭೆ. ಗ್ರೀನ್ ವುಡ್ ಹೈ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹನ್ನೊಂದನೆಯ ತರಗತಿಯಲ್ಲಿ ಓದುತ್ತಿರುವ ಇವಳು ಪ್ರತಿಭಾವಂತ ವಿದ್ಯಾರ್ಥಿನಿ. ಇವಳೆಲ್ಲ ಲಲಿತಕಲೆಗಳ ಬಗೆಗಿನ ಚಟುವಟಿಕೆಗಳಿಗೆ ಸಾಫ್ಟವೇರ್ ಕಂಪೆನಿಯೊಂದರ ‘ವೈಸ್ ಪ್ರೆಸಿಡೆಂಟ್’ ಆಗಿರುವ ಇವಳ ತಾಯಿ ರೂಪಾ ರಾಜ್ ದೊಡ್ಡ ಒತ್ತಾಸೆ.
ಶಾಲೆಯ ಎಲ್ಲ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಬಹುಮಾನಗಳನ್ನು ಗಳಿಸಿದ ವಿಶೇಷತೆ ರಂಜನಿಯದಾಗಿದೆ. ನೃತ್ಯ ಸಂಯೋಜನೆಯಲ್ಲೂ ಆಸಕ್ತಳಾದ ರಂಜನಿ, ಶಾಲೆಯ ಅನೇಕ ನೃತ್ಯಗಳಿಗೆ ತಾನೇ ಸ್ವಂತವಾಗಿ ನೃತ್ಯ ಸಂಯೋಜಿಸಿರುವ ಗರಿಮೆ ಇವಳದು. ಕಲಾರಾಧಕಿಯಾದ ರಂಜಿನಿ ಅತ್ಯುತ್ತಮ ವೇಣುವಾದಕಿ ಕೂಡ. ಸ್ವರ-ಲಯಗಳ ಬಗ್ಗೆ ಅಪಾರ ಜ್ಞಾನವುಳ್ಳ ರಂಜನಿ, ಹಲವಾರು ವರ್ಷಗಳಿಂದ ಖ್ಯಾತ ಗುರು ಶ್ರೀ. ರಾಜ್ ಚಂದ್ರನ್ ಬಳಿ ಕೊಳಲು ಕಲಿಯುತ್ತಿದ್ದಾಳೆ. ಕರ್ನಾಟಕ ಶೈಲಿಯ ‘ಕೊಳಲು ಅರಂಗೆಟ್ರಂ’ ಮಾಡಲು ಸಜ್ಜಾಗಿರುವುದು ಅವಳ ನೈಪುಣ್ಯತೆಗೆ ದ್ಯೋತಕ. ಜೊತೆಗೆ, ವಿವಿಧ ಸಂಗೀತ ವಾದ್ಯಗಳನ್ನೂ ಇವಳು ಕಲಿಯುತ್ತಿದ್ದು, ಅವುಗಳಲ್ಲಿ ಕೀಬೋರ್ಡ್ ಮತ್ತು ವೀಣೆ ಪ್ರಮುಖವಾಗಿವೆ. ಯೋಗಾಭ್ಯಾಸವನ್ನೂ ರೂಢಿಸಿಕೊಂಡಿರುವ ರಂಜನಿ, ಬ್ಯಾಲೆ ಸೇರಿದಂತೆ ವಿವಿಧ ನೃತ್ಯಶೈಲಿಗಳ ಕಲಿಕೆಯಲ್ಲಿ ಆಸಕ್ತಳೂ ಕೂಡ.
ನೃತ್ಯಗುರು ನಾಗಶ್ರೀ ಅವರ ‘ನಾಟ್ಯ ಸಂಕುಲ’ ನೃತ್ಯಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ನರ್ತಿಸುವ ಇವಳದೇ ಆದ ‘ರಂಜನಿ ವೀಣಾ’ ಎಂಬ ಯು ಟ್ಯೂಬ್ ಕೂಡ ಇದೆ. ಇದರಲ್ಲಿ ಇವಳ ಅನೇಕ ಕೊಳಲು ವಾದನದ ಸುಶ್ರಾವ್ಯ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.







5 comments
Excellent Performance…….
Thank you Shivaprasad avare.
Beautiful Article.
Thank you sir.
ಅಪಾರ ಧನ್ಯವಾದಗಳು ಸರ್.