Image default
Poems

ಇದು ಬೊಂಬೆಯಾಟವಯ್ಯ

ನಿರಾಕಾರ ನಿರ್ಗುಣ ದೇವನೇ

ನಿನಗ್ಯಾಕಿಂಥ ದುರ್ಗತಿ ಹೇಳಪ್ಪ

ಜಗನ್ನಾಟಕ ಸೂತ್ರಧಾರಿ

ಎಂದಿನ್ನು ಬೀಗದಿರು

ಸೂತ್ರಧಾರಿಯಲ್ಲ

ನೀ ಪಾತ್ರಧಾರಿ

ನೀನೆ ಸೃಜಿಸಿದ ಮಾನವನ

ಕೈಯಲ್ಲಿ ಸಿಲುಕಿದ

ಅಸಹಾಯ ವೇಷಧಾರಿ

ರಾಮ-ಕೃಷ್ಣ, ಶಿವ-ಪಾರ್ವತಿ ಇತ್ಯಾದಿ

ನವಗ್ರಹಗಳ ಬರಾತಿನ ಜೊತೆ

ಗಲ್ಲಿಗಲ್ಲಿಗಳಲ್ಲಿ ಕುಡಿಯೊಡೆದ

ಪ್ಲೇಗು-ಸಿಡುಬು-ಏಡ್ಸಮ್ಮಗಳೆಂಬೋ

ಅಮ್ಮನವರ ದೊಡ್ಡ ದಂಡು

ಜಾಗತೀಕರಣದತ್ತ ದಾಪುಗಾಲಿಕ್ಕಿದರೂ

ಮನುಜನೆದೆಯ ನೂರು ಗುಮ್ಮಗಳು

ಋತ್ಯಾತೀತ, ಸೂಕ್ಷ್ಮ , ಅಗ್ರಾಹ್ಯ ಚೇತನವೇ

ಬಯಲಿಗೊಂದು ಆಲಯವೇ?

ಕಲ್ಲು ಜೈಲಿನ ಕರ್ಮ

ಬಲವಂತ ಮಾಘಸ್ನಾನ, ಷೋಡೋಪಚಾರಗಳು

ಸಹವಾಸ ದೋಷ ನಿನಗೂ ತಪ್ಪಲಿಲ್ಲ

ಮನುಜರಿಂದಂಟಿದ ಅಂಟುರೋಗ

ಮದುವೆ-ಮುಂಜಿ, ಶಯನೋತ್ಸವಕೆ

ಜೋಗುಳದ ಹಾಡು

ಮಲಗಿಲ್ಲದವನ ತಟ್ಟಿಎಬ್ಬಿಸೋ ಪ್ರಭಾತರಾಗ

ನಿನ್ನ ಮೈಗಂಟದ ಮೈಲಿಗೆ ಕಳೆದು

ಕ್ಷೀರಾಭಿಷೇಕದ ಸ್ನಾನ-ವೈವಿಧ್ಯ ಅಲಂಕಾರ

ಅಮೃತಮಯಿಗೆ ಅಶನ ನೈವೇದ್ಯ

ಶೀತ ಕಳೆಯುವ ಧೂಪ-ದೀಪದಾರತಿ

ರಂಗೇರಿದೀ ಅಂಕದಲಿ

ನಿನ್ನಾಟ ಸಾಗದಿನ್ನೇನು

ತೆಪ್ಪಗೆ ಕೈ ಚೆಲ್ಲಿ ಲೋಗರಾಟವ

ನೋಡೋ ಪರಮಾತ್ಮ.

Related posts

ಪವಾಡ ಪುರುಷ

YK Sandhya Sharma

ಗೊಂಡಾರಣ್ಯ

YK Sandhya Sharma

ಗೂಢ-ನಿಗೂಢ

YK Sandhya Sharma

3 comments

Nuggehalli Pankaja October 12, 2019 at 8:09 pm

kELABEKE? padyadlli nurita kai!

Reply
YK Sandhya Sharma October 12, 2019 at 10:56 pm

ನಿಮ್ಮ ಪ್ರೀತಿ-ಅಭಿಮಾನದ ಮೆಚ್ಚುಗೆಯ ನುಡಿಗೆ ಅನೇಕ ವಂದನೆಗಳು ಅಮ್ಮ.

Reply
YK Sandhya Sharma October 14, 2019 at 1:30 pm

ನಿಮ್ಮ ಅಮೂಲ್ಯ ಅಭಿಪ್ರಾಯ ಮತ್ತು ಮೆಚ್ಚುಗೆಯ ಹಾರೈಕೆಗೆ ವಿನಮ್ರ ಪ್ರಣಾಮಗಳು.

Reply

Leave a Comment

This site uses Akismet to reduce spam. Learn how your comment data is processed.