‘ಸಾಧನ ಸಂಗಮ’ ನೃತ್ಯ ಸಂಸ್ಥೆಯ ‘ಮುಕುಳ’ ನೃತ್ಯೋತ್ಸವ – 2025

ಸಾಧನ ಸಂಗಮದ ಯಶಸ್ವೀ ‘ಮುಕುಳ’ ನೃತ್ಯೋತ್ಸವ
ಉದಯೋನ್ಮುಖ ನೃತ್ಯ ಕಲಾವಿದರ ಸಮಗ್ರ ಅಭಿವ್ರುದ್ಧಿಗಾಗಿ ನೃತ್ಯ ಕ್ಷೇತ್ರದಲ್ಲಿ ಅವಿರತ ಶ್ರಮಿಸುತ್ತಿರುವ ಖ್ಯಾತ ನೃತ್ಯಶಾಲೆ ‘ಸಾಧನ ಸಂಗಮ’. ಇದರ ನೇತೃತ್ವ ವಹಿಸಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಯೋಗ- ನೃತ್ಯಗಳ ಸಂಗಮದ ಬಹುಮುಖ ಪ್ರತಿಭೆ. ಕಳೆದ 23 ವರ್ಷಗಳಿಂದ ‘ಸಾಧನ ಸಂಗಮ’ ದ ಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಅವರ ಪುತ್ರಿ ಗುರು ಡಾ. ಪಿ. ಸಾಧನಶ್ರೀ, ಪ್ರತಿವರ್ಷ ಉದಯೋನ್ಮುಖ ನೃತ್ಯ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುವ ಸದಾಶಯದಿಂದ ‘ಮುಕುಲೋತ್ಸವ’ ಒಂದು ವಿಶಿಷ್ಟ ಪ್ರಾಯೋಗಿಕ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಚಿಕ್ಕಮಕ್ಕಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಗಳು ಅತ್ಯವಶ್ಯ. ಇದನ್ನು ಮನಗಂಡ ಸಾಧನ ಸಂಗಮ, ವೇದಿಕೆಯನ್ನು ಒದಗಿಸುವುದಲ್ಲದೆ, ಉದಯೋನ್ಮುಖರನ್ನು ಪ್ರೋತ್ಸಾಹಿಸಲು ಉತ್ತಮಾಭಿರುಚಿಯುಳ್ಳ ಪ್ರೇಕ್ಷಕರು, ಸ್ಥಳಾವಕಾಶ ಇನ್ನಿತರ ಎಲ್ಲ ಸೌಲಭ್ಯಗಳೊಡನೆ ಬಹುಮಾನಿಸಿ ಪ್ರೋತ್ಸಾಹಿಸುವ ಸತ್ ಸಂಪ್ರದಾಯವನ್ನು ಅಳವಡಿಸಿಕೊಂಡಿರುವುದು ವಿಶೇಷ.







