ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಅನೇಕ ಬಿಕ್ಕಟ್ಟಿನ ಸಂದರ್ಭಗಳು ಹೊಸ ಅನ್ವೇಷಣೆಗೆ, ಮಾರ್ಗಕ್ಕೆ ನಾಂದಿ ಹಾಕಿಕೊಟ್ಟ ಪರ್ವಕಾಲವಿದು. ನಾವಿಂದು, ಯಾರೂ ನಿರೀಕ್ಷಿಸಿರದ, ಊಹಿಸಿರದ ‘ಕೊರೋನಾ’ ಎಂಬ ಬರಸಿಡಿಲಿನ ಆಘಾತದ ಒಂದು...
ಸೃಜನಶೀಲತೆ ಕಲಾವಿದರ ಹುಟ್ಟುಗುಣ. ಪ್ರತಿಯೊಬ್ಬ ಚಿಂತಕ ಚೇತನದಲ್ಲೂ ಸ್ರವಿಸುವ ನಿರಂತರ ಪ್ರಕ್ರಿಯೆ. ಸದಾ ಕ್ರಿಯಾತ್ಮಕವಾಗಿರ ಬಯಸುವ ಕಲಾವಿದ ಜಡವಾಗಿ ಸುಮ್ಮನೆ ಕುಳಿತಿರಲು ಸಾಧ್ಯವೇ ಇಲ್ಲ....
ಹೆಸರಿಗೆ ತಕ್ಕಂತೆ ವಿವಿಧ ಕಲೆಗಳನ್ನು ತೆಕ್ಕೆಗೆ ತೆಗೆದುಕೊಂಡು, ಸಾಧಕಪಥದಲ್ಲಿ ಕ್ರಮಿಸುತ್ತಿರುವ ಕಲಾವತಿ ನಡೆದು ಬಂದ ಹಾದಿ ಹೂವಿನ ಹಾಸಿಗೆಯದ್ದಲ್ಲ. ಮಡಿಕೇರಿಯಲ್ಲಿ ಹುಟ್ಟಿ, ಚಿಕ್ಕಮಗಳೂರು ಜಿಲ್ಲೆಯ...
ಮತ್ತೆ ಫೋನು ಟ್ರಿಣಗುಟ್ಟಿತು. ಬೆಳಗಿನಿಂದ ಒಂದೇಸಮನೆ ಫೋನಿನ ಕರೆಗೆ ಉತ್ತರಿಸಿ ಉತ್ತರಿಸಿ ಸಾಕಾಗಿಹೋಗಿತ್ತು ಮುಕುಂದರಾಯರಿಗೆ. ಮೊಬೈಲ್ ಫೋನೂ ಬಾಯ್ಮುಚ್ಚಿಕೊಂಡಿರಲಿಲ್ಲ. ಆದರೂ ಅವರು ಉತ್ಸಾಹ...
ಸದಾ ಹಸನ್ಮುಖದ ಲವಲವಿಕೆಯ ಹುಡುಗಿ ಸಿಂಧೂ ಪುರೋಹಿತ್ ಪ್ರತಿಭಾವಂತೆ. ಆಯುರ್ವೇದ ವೈದ್ಯಕೀಯ ವಿದ್ಯಾಭ್ಯಾಸ ಮಾಡಿರುವ ವೈದ್ಯೆ, ಸೊಗಸಾಗಿ ನೃತ್ಯ ಮಾಡಬಲ್ಲಳು, ಅಷ್ಟೇ ಚೆನ್ನಾಗಿ ನಾಟಕಗಳಲ್ಲಿ...
ಅಂತರರಾಷ್ಟ್ರೀಯ ಖ್ಯಾತಿಯ ‘’ ಭರತ ದರ್ಶನ ಸ್ಕೂಲ್ ಆಫ್ ಡಾನ್ಸ್’’ ನೃತ್ಯಶಾಲೆಯ ಜೀವನಾಡಿ ವಿದುಷಿ ನಾಗಮಣಿ ಶ್ರೀನಿವಾಸರಾವ್. ‘ಕಲಾಕ್ಷೇತ್ರ ಬಾನಿ’ಯಲ್ಲಿ ನುರಿತ ಪ್ರಸಿದ್ಧ ನಾಟ್ಯಗುರು,...