ಮನಸ್ಸಿಗೆ ಮುದವೆರೆವ, ಶಾಂತತೆ ಪಸರಿಸುವ ಸಾತ್ವಿಕಾಭಿನಯದ ನೃತ್ಯ ನಮ್ಮರಿವಿಲ್ಲದೆ ಹೃದಯವನ್ನು ಸ್ಪರ್ಶಿಸುತ್ತದೆ. ಅಂಥ ಒಂದು ಆರ್ಭಟವಿಲ್ಲದ ಸೌಮ್ಯರೇಖೆಯ ಪರಿಧಿಯೊಳಗೆ ಚೆಲುವನ್ನು ಬೀರಿದ ನೃತ್ಯ ಪ್ರದರ್ಶನ
ಅರ್ವರ್ಣೀಯ ಅನುಭೂತಿ ಕಲ್ಪಿಸಿದ್ದ ಕಲಾತ್ಮಕ ಆವರಣದಲ್ಲಿ ದೇವ ವೆಂಕಟೇಶ್ವರನ ಸುಂದರ ಸನ್ನಿಧಾನ. ತೂಗಾಡುವ ದೀಪಮಾಲೆ-ಹೂಮಾಲೆಗಳು. ನವರಂಗದಲ್ಲಿ ಭಕ್ತಿ ರಸಾರ್ಚನೆಯಲ್ಲಿ ತಲ್ಲಿನಳಾದ ನೃತ್ಯ ಕಲಾವಿದೆ ಸಾಕ್ಷೀ
ನೃತ್ಯಮಂದಿರದಲ್ಲಿ ಕುಳಿತಿದ್ದ ಕಲಾರಸಿಕರ ತದೇಕ ದೃಷ್ಟಿಯನ್ನು ಮಿಂಚಿನಬಳ್ಳಿಯಂತೆ ನರ್ತಿಸುತ್ತಿದ್ದ ಅಪೂರ್ವ ಕಲಾವಿದೆ ತ್ರಿಷಾ ರೈ ಅದ್ಭುತ ನರ್ತನ ಸೆರೆಹಿಡಿದಿತ್ತು. ಪಾದರಸದಂತೆ ಚಲಿಸುತ್ತಿದ್ದ ಆಕೆಯ ವೇಗದ