ನವವರ್ಷದ ಹೊಸ ಹೊನಲು-ಚೈತನ್ಯ ತುಂಬಿ ತುಳುಕುತ್ತಿದ್ದ ಏಳುಜನ ಚಿಣ್ಣರು ಇತ್ತೀಚಿಗೆ ನಗರದ ಚೌಡಯ್ಯ ಮೆಮೋರಿಯಲ್ ಮಂದಿರದಲ್ಲಿ ಮಿಂಚಿನ ಬಳ್ಳಿಗಳಂತೆ ರೋಮಾಂಚಕವಾಗಿ ನರ್ತಿಸಿ ಕಣ್ಮನ ಸೆಳೆದರು.
ಕರೋನಾದ ಸಂಕೀರ್ಣ ದಿನಗಳ ಆತಂಕವನ್ನು ಕೊಂಚಮಟ್ಟಿಗೆ ದಾಟಿರುವ ಕಲಾರಂಗ ನಿಧಾನವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಂದ ಗರಿಗೆದರುತ್ತಿದೆ. ರಂಗಮಂದಿರಗಳಲ್ಲಿ ಗಲ್ ಗಲ್ ಗೆಜ್ಜೆ ಅನುರಣಿಸುತ್ತಿದೆ. ಕಳೆದೆರಡು ವರ್ಷಗಳಿಂದ