ಖ್ಯಾತ ‘ಅನನ್ಯ ಕಲಾನಿಕೇತನ’ ನೃತ್ಯಸಂಸ್ಥೆಯ ನಿರ್ದೇಶಕಿ ಮತ್ತು ಸಮರ್ಥ ನಾಟ್ಯಗುರು ಕೆ. ಬೃಂದಾ ಅಹರ್ನಿಶಿ ಸದ್ದಿಲ್ಲದೆ ಸಾಧನಗೈಯುತ್ತಿರುವ ನೃತ್ಯಸಾಧಕಿ. ವಿದುಷಿ ಬೃಂದಾರ ನೇತೃತ್ವದ ನೃತ್ಯಶಾಲೆಯು ಈಗಾಗಲೇ ಅಸಂಖ್ಯಾತ ನೃತ್ಯಕಲಾವಿದರನ್ನು ನಾಟ್ಯಲೋಕಕ್ಕೆ ಕೊಡುಗೆಯಾಗಿ ನೀಡಿ ಅಹರ್ನಿಶಿ ಸೇವೆ ಸಲ್ಲಿಸುತ್ತ ಸೇವಾಪಥದಲ್ಲಿ ಸಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಕಲಾಭಿವೃದ್ಧಿಗೆ ಪೋಷಣೆ ನೀಡುವ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ನಾಡಿನ ಹಿರಿ-ಕಿರಿಯ ಅನೇಕ ಪ್ರತಿಭೆಗಳಿಗೆ ವೇದಿಕೆಗಳನ್ನು ಸೃಜಿಸುತ್ತ ಬಂದಿರುವುದು ಸ್ತುತ್ಯಾರ್ಹ. ಇದೇ ತಿಂಗಳ 14 ಮತ್ತು 15 ರಂದು ಸಂಜೆ 6 ಗಂಟೆಗೆ ನಗರದ ಸೇವಾಸದನದಲ್ಲಿ ‘ಅಹರ್ನಿಶಿ-2023’ ಶೀರ್ಷಿಕೆಯ ಎರಡು ದಿನಗಳ ಶಾಸ್ತ್ರೀಯ ನೃತ್ಯೋತ್ಸವವನ್ನು ಆಯೋಜಿಸಲಾಗಿದೆ.
Ananya Kala Niketana-Aharnishi-2023