ಖ್ಯಾತ ‘ಅನನ್ಯ ಕಲಾನಿಕೇತನ’ ನೃತ್ಯಸಂಸ್ಥೆಯ ನಿರ್ದೇಶಕಿ ಮತ್ತು ಸಮರ್ಥ ನಾಟ್ಯಗುರು ಕೆ. ಬೃಂದಾ ಅಹರ್ನಿಶಿ ಸದ್ದಿಲ್ಲದೆ ಸಾಧನಗೈಯುತ್ತಿರುವ ನೃತ್ಯಸಾಧಕಿ. ವಿದುಷಿ ಬೃಂದಾರ ನೇತೃತ್ವದ ನೃತ್ಯಶಾಲೆಯು ಈಗಾಗಲೇ ಅಸಂಖ್ಯಾತ ನೃತ್ಯಕಲಾವಿದರನ್ನು ನಾಟ್ಯಲೋಕಕ್ಕೆ ಕೊಡುಗೆಯಾಗಿ ನೀಡಿ ಅಹರ್ನಿಶಿ ಸೇವೆ ಸಲ್ಲಿಸುತ್ತ ಸೇವಾಪಥದಲ್ಲಿ ಸಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಕಲಾಭಿವೃದ್ಧಿಗೆ ಪೋಷಣೆ ನೀಡುವ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ನಾಡಿನ ಹಿರಿ-ಕಿರಿಯ ಅನೇಕ ಪ್ರತಿಭೆಗಳಿಗೆ ವೇದಿಕೆಗಳನ್ನು ಸೃಜಿಸುತ್ತ ಬಂದಿರುವುದು ಸ್ತುತ್ಯಾರ್ಹ. ಇದೇ ತಿಂಗಳ 14 ಮತ್ತು 15 ರಂದು ಸಂಜೆ 6 ಗಂಟೆಗೆ ನಗರದ ಸೇವಾಸದನದಲ್ಲಿ ‘ಅಹರ್ನಿಶಿ-2022’ ಶೀರ್ಷಿಕೆಯ ಎರಡು ದಿನಗಳ ಶಾಸ್ತ್ರೀಯ ನೃತ್ಯೋತ್ಸವವನ್ನು ಆಯೋಜಿಸಲಾಗಿದೆ.
ಮೊದಲದಿನ- 14 ಬುಧವಾರ ಸಂಜೆ 6 ಗಂಟೆಗೆ- ಪ್ರವೀಣ್ ಕುಮಾರ್ ಅವರಿಂದ ಭರತನಾಟ್ಯ ಕಾರ್ಯಕ್ರಮ.7.15 ಕ್ಕೆ ಅನನ್ಯ ಕಲಾನಿಕೇತನ ಡ್ಯಾನ್ಸ್ ಎನ್ಸೆಮ್ಬಲ್ – (ಗುರು ಕರ್ನಾಟಕ ಕಲಾಶ್ರೀ ಕೆ. ಬೃಂದಾ ಮತ್ತು ವಿದುಷಿ ಎಂ. ಅನನ್ಯ) ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಿ. ಮುಖ್ಯ ಅತಿಥಿಗಳು- ಗುರು ಚಂದ್ರಶೇಖರ ನಾವಡ – ನಿರ್ದೇಶಕರು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ -ಸುರತ್ಕಲ್ ಮತ್ತು ಗುರು ಸತ್ಯನಾರಾಯಣ ರಾಜು -ಖ್ಯಾತ ಭರತನಾಟ್ಯ ಕಲಾವಿದರು.
ಎರಡನೆಯ ದಿನ- 15 ಗುರುವಾರ ಸಂಜೆ 6 ಗಂಟೆಗೆ- ವಿದುಷಿ ಸ್ನೇಹಾ ದೇವಾನಂದನ್ –(ಕಲಾನಿಧಿ ನೃತ್ಯ ಮಂದಿರಂ) ಭರತನಾಟ್ಯ ಪ್ರಸ್ತುತಿ – 7.15 ಕ್ಕೆ ರಸಿಕಾ ಡ್ಯಾನ್ಸ್ ಎನ್ಸೆಮ್ಬಲ್ ( ಗುರು ಕರ್ನಾಟಕ ಕಲಾಶ್ರೀ ಕಿರಣ್ ಸುಬ್ರಮಣ್ಯಂ ಮತ್ತು ಸಂಧ್ಯಾ ಕಿರಣ್) ಭರತನಾಟ್ಯ ಕಾರ್ಯಕ್ರಮ. ಮುಖ್ಯ ಅತಿಥಿಗಳು- ಡಾ. ಪದ್ಮಜಾ ಸುರೇಶ್-ಆತ್ಮಾಲಯ ಅಕಾಡೆಮಿ ಅಧ್ಯಕ್ಷೆ, ಕಲಾಯೋಗಿ ಡಾ. ಮಾಲಿನಿ ರವಿಶಂಕರ್ -ಲಾಸ್ಯವರ್ಧನ ಟ್ರಸ್ಟ್, ಕಲಾತ್ಮಕ ನಿರ್ದೇಶಕಿ. ಕಾರ್ಯಕ್ರಮದ ಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಹಾರ್ದಿಕ ಸ್ವಾಗತ
**********************