Image default
Events

Nrutyankura Foundation-Bi-monthly Dance Festival

ನೃತ್ಯಾಂಕುರ ಫೌಂಡೇಶನ್ – ದ್ವೈಮಾಸಿಕ ನೃತ್ಯೋತ್ಸವ

ಬಹುಮುಖ ಪ್ರತಿಭೆಯ ರೇಖಾ ಸತೀಶ್, ಬೆಂಗಳೂರಿನ ಕೆಲವೇ ಕೆಲವು ಕೂಚಿಪುಡಿ ನೃತ್ಯಗಾರ್ತಿಯರ ಸಾಲಿನಲ್ಲಿ ಖ್ಯಾತನಾಮರು.  ಅಂತರರಾಷ್ಟ್ರೀಯ ನೃತ್ಯಕಲಾವಿದೆಯಾದ ಇವರು  ದೇಶ-ವಿದೇಶಗಳಲ್ಲಿ ನೃತ್ಯಪ್ರದರ್ಶನ ನೀಡುವ ಜೊತೆಗೆ  ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಕಾಪಾಡುವ, ಬೆಳೆಸುವ ಹಾಗೂ ಪಸರಿಸುವ ಅನೇಕ ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸುತ್ತ ಬಂದಿದ್ದಾರೆ. ಇದಕ್ಕಾಗಿ ಮುಡಿಪಾಗಿರುವ ಇವರ ನೇತೃತ್ವದ ಸಂಸ್ಥೆ ‘ನೃತ್ಯಾಂಕುರ ಫೌಂಡೇಶನ್’- ನಿಸ್ವಾರ್ಥ ಸೇವಾ ಮನೋಭಾವದಿಂದ ಜನಿಸಿದ ಸಂಸ್ಥೆ. ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಸದುದ್ದೇಶದಿಂದ ಈ ವರ್ಷವಿಡೀ ದ್ವೈಮಾಸಿಕ ನೃತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ನಡೆಸುತ್ತ ಬಂದಿರುವುದು ಉಳಿದವರಿಗೆ ಮಾದರಿ.

ಪ್ರಸ್ತುತ ಇದೇ ತಿಂಗಳ 29 ಭಾನುವಾರ ಸಂಜೆ 6 ಗಂಟೆಗೆ ಜೆ.ಪಿ ನಗರದ ‘ಆರ್ಟ್ ಖೋಜ್’ ಸಹಯೋಗದೊಂದಿಗೆ  ‘ಆರ್ಟ್ ಖೋಜ್’ (31/2, ಮೊದಲ ಮಹಡಿ, 22 ನೆಯ ಮುಖ್ಯರಸ್ತೆ, ಆರ್.ಕೆ.ಕಾಲೋನಿ, ಮಾರೇನಹಳ್ಳಿ, ಜೆಪಿ ನಗರ 2 ನೆಯ ಹಂತ, ಬೆಂಗಳೂರು- 78) ಸಭಾಂಗಣದಲ್ಲಿ 3 ನೇ ಆವೃತ್ತಿಯ ಕಾರ್ಯಕ್ರಮವನ್ನು ನೃತ್ಯಾಂಕುರ ಫೌಂಡೇಶನ್ಹಮ್ಮಿಕೊಂಡಿದೆ.

ನೃತ್ಯೋತ್ಸವದಲ್ಲಿ ಗುರು ರೇಖಾ ಸತೀಶ್ ಅವರ ಶಿಷ್ಯರಾದ ಏಷಾ ಪ್ಲಕ್ಕಲ್ , ನಿಧಿ ಸುಭಾಷ್ ಕುಚಿಪುಡಿ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ಮೋಹುಲ್ ಮುಖರ್ಜಿ ಭರತನಾಟ್ಯ ಶೈಲಿಯಲ್ಲಿ ಮತ್ತು ದೇಬಶಿಶ್ ಪಟ್ನಾಯಕ್ ಮತ್ತು ಲೀನಾ ಮೊಹಂತಿ ಒಡಿಸ್ಸಿ ಶೈಲಿಯಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳು-  ಲಿಪಿ ಪ್ರಾಜ್ಞೆ ಶ್ರೀಮತಿ ವೈ.ಕೆ.ಸಂಧ್ಯಾ ಶರ್ಮ, ಖ್ಯಾತ ಲೇಖಕಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ . ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಪರ್ಕ – 9845063634

                                            ********

Related posts

Kuchipudi Nrithya Sambrama

YK Sandhya Sharma

Shruthilaya Fine Arts-Bengaluru

YK Sandhya Sharma

Shivapriya School of Dance-Vahni

YK Sandhya Sharma

Leave a Comment

This site uses Akismet to reduce spam. Learn how your comment data is processed.