ಕಣ್ ಬಿಟ್ಟೊಡನೆ ದೃಷ್ಟಿ-ಕಿವಿಗಳಿಗೆ
ರಾಚುವ ಭವಿಷ್ಯವಾಣಿಯ ಭೂತ
ಬೆಳ್ಳಂಬೆಳಕಿನಲೆ
ಜ್ಞಾನದೀಪ್ತಿಗೆ
ಅರಿವಳಿಕೆಯ ಮದ್ದು
ಭವಿಷ್ಯ-ಜಾತಕಫಲ
ಪೂಜೆ-ಆಚರಣೆಗಳ
ಅಂಧಾನುಕರಣೆಯ
ಸ್ತೋತ್ರಮಾಲೆ
ವೈಜ್ಞಾನಿಕ ಅನ್ವೇಷಣೆ
ವೈಚಾರಿಕ ಬೋಧೆ
ಪುಂಖಾನುಪುಂಖ
ಪವಾಡ ಭಂಜನ
ಸತ್ಯದರ್ಶನ
ಶಿಕ್ಷಣದ ಮುಖವಾಡ
ರಾತ್ರಿ ಕಂಡ ಬಾವಿಗೆ
ಹಗಲು ದಬ್ಬುವ ಅಖಾಡ
ಇಬ್ಬಂದಿ ಇರುಕಿಸುವ
ಬಹುವಾಹಿನಿಗಳ
ವ್ಯಾಪಾರ ನೀತಿ
ದ್ವಂದ್ವದಲಿ ಕಣ್ಕಟ್ಟಲೆಳೆಸುವ
ವೈರುಧ್ಯ ಗತಿ
ಪಾಮರರ ವಶೀಕರಿಸಿ
ಪಾತಾಳಕ್ಕೊತ್ತುವ
ಚತುರಮತಿ !