Image default
Poems

ಕಟು ಸತ್ಯ

ಅತ್ತ-

ಎದೆಯೊಳಗೆ ರಿಂಗಣಗುಣಿವ

ಪಾಪಭೀತಿಯ ಸಂಚಯವನೆಲ್ಲ

ತಲ್ಲಣಿಪ ಭಕ್ತಿ ಭಾವದಿ

 ಮುಗಿದ ಕೈಗಳಲಿ

 ಭದ್ರ ಹುದುಗಿಸಿ

ಗರ್ಭಗುಡಿಯ ಗಾರುಡಿಗನ

 ಕೃಪೆಯ ನೆಚ್ಚಿ

ತಪ್ಪು ಕಾಣಿಕೆ-ದಕ್ಷಿಣೆ-ಹರಕೆಯಲಿ

 ಶುಚಿರ್ಗೊಂಡ ಭ್ರಮಾಲೋಕದಿ

ಕಣ್ಮುಚ್ಚಿ ತನ್ಮಯದಿ

ಶರಣು ಭಕ್ತಸ್ತೋಮ

ಇತ್ತ-

ದೇವರು ಇಲ್ಲೇ ಇದ್ದಾನೆ

 ಎಂಬ ಜಗತ್ ಜಾಹೀರು

ಜೋರು ಜಾಗಟೆ-ಘಂಟೆ

ಮಂತ್ರಬೂದಿಯ

ಮಂಗಳಾರತಿ ಬೆಳಗಿ

ಕೆಂಧೂಳಿಯಾರ್ಚನೆ ಬೆಡಗು

ಪುಷ್ಪ-ಪ್ರಸಾದ ಪ್ರಸ್ಥಾನಗಳ

ಜವನಿಕೆ

 ತೆರೆ ಮರೆಯ

 ದಿನನಿತ್ಯ ಈ ಏಕತಾನದ

ಗೊಂಬೆಯಾಟದಿ ಪಳಗಿದ

 ಪೂಜಾರಿಗೊಬ್ಬನಿಗೇ ಗೊತ್ತು

ದೇವರು ಇಲ್ಲಿಲ್ಲವೆಂದು!

Related posts

ಗೂಢ-ನಿಗೂಢ

YK Sandhya Sharma

ಪವಾಡ ಪುರುಷ

YK Sandhya Sharma

ನೇಣು ಬಿಗಿವ ನೆನೆಪುಗಳು

YK Sandhya Sharma

2 comments

G.Kishan Rao October 23, 2019 at 1:16 am

ನಿಮ್ಮ ಅಂತರ್ಜಾಲ ಪತ್ರಿಕೆ ಮೈದುಂಬಿ ಬರುತ್ತಿದೆ.ಕವಿತೆ, ಕಿರುಗತೆ,ಪುಸ್ತಕ ವಿಮರ್ಶೆ ಮುಂತಾದುವುಗಳು ಹೆಚ್ಚು ಕಾಣಿಸಿಕೊಳ್ಳಲಿ,ಉರಯೋನ್ನುಖರಿಗೆ ಒಂದು ಒಳ್ಳೆಯ ವೇದಿಕೆ ಯಾಗಲಿ
ಅಭಿನಂದನೆಗಳು.

Reply
YK Sandhya Sharma October 23, 2019 at 8:46 am

ನಿಮ್ಮ ಅಮೂಲ್ಯ ಸಲಹೆಗೆ ಧನ್ಯವಾದಗಳು.

Reply

Leave a Comment

This site uses Akismet to reduce spam. Learn how your comment data is processed.